ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಇತಿಹಾಸ

ದಾವಣಗೆರೆ ಜಿಲ್ಲಾ ವಿವರ:

ದಾವಣಗೆರೆ ಮೊದಲು ಚಿತ್ರದುರ್ಗ ಜಿಲ್ಲೆಗೆ ಸೇರಿತ್ತು. ಆಗಸ್ಟ್ 15, 1997ರಂದು ಅಂದಿನ ಮುಖ್ಯಮಂತ್ರಿ ಶ್ರೀ ಜೆ ಹೆಚ್ ಪಟೇಲ್ ಅವರ ನಿರ್ಧಾರದ ಮೇರೆಗೆ ಚಿತ್ರದುರ್ಗ ಜಿಲ್ಲೆಯಿಂದ ದಾವಣಗೆರೆ, ಹರಿಹರ, ಮತ್ತು ಜಗಳೂರು ತಾಲ್ಲೂಕುಗಳನ್ನು, ಶಿವಮೊಗ್ಗ ಜಿಲ್ಲೆಯಿಂದ ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳನ್ನು, ಹಾಗೂ ಬಳ್ಳಾರಿ ಜಿಲ್ಲೆಯಿಂದ ಹರಪನಹಳ್ಳಿ ತಾಲ್ಲೂಕುಗಳನ್ನು ಸೇರಿಸಿ ಹೊಸ ದಾವಣಗೆರೆ ಜಿಲ್ಲೆಯನ್ನು ರಚಿಸಲಾಯಿತು.

 

ಪ್ರೇಕ್ಷಣೀಯ ಸ್ಥಳಗಳು

ಕುಂದವಾಡ ಕೆರೆಯು ನಗರದ ಜನರಿಗೆ ಅತ್ಯಂತ ಹತ್ತಿರವಿರುವ ಸ್ಠಳವಾಗಿದೆ. ಹರಿಹರದ ತುಂಗಭದ್ರೆ ಮತ್ತು ಪುರಾತನ ಹರಿಹರೇಶ್ವರ ದೇವಾಲಯ, ಶಾಂತಿಸಾಗರ, ಕೊಂಡಜ್ಜಿಯ ಅರಣ್ಯಧಾಮ, ಪುರಾತನ ಬಾಗಳಿ ಕಲ್ಲೇಶ್ವರ ದೇವಾಲಯ, ನೀಲಗುಂದದ ಭೀಮೇಶ್ವರ ದೇವಾಲಯಗಳು, ಉಕ್ಕಡಗಾತ್ರಿ ಕರಿಬಸವೇಶ್ವರ, ಅಜ್ಜಯ್ಯ ದೇವಾಲಯ,ನಂದಿಗುಡಿ ,ಹಿಂದಿನ ಕಾಲದ ವೃಷಭಮಠ, ಸಂತೇಬೆನ್ನೂರಿನ ಪುರಾತನ ಪುಷ್ಕರಿಣಿ,ದೊಡ್ಡಬಾತಿ ಪವಿತ್ರವನ,ಆನೆಕೊಂಡದ ಪುರಾತನ ಬಸವೇಶ್ವರ ಹಾಗು ಈಶ್ವರ ದೇವಾಲಯ.

ಪೂರ್ವದ ಚಿತ್ರದುರ್ಗ ಮತ್ತು ಶಿವಮೊಗ್ಗ ಮತ್ತು ನೈಋತ್ಯದಲ್ಲಿ ಹಾವೇರಿ. ತುಂಗಭದ್ರ ನದಿ ಹೊನ್ನಾಳಿ ತಾಲ್ಲೂಕಿನಲ್ಲಿ ಹಾದುಹೋಗುತ್ತದೆ ಮತ್ತು ನಂತರ ಪಶ್ಚಿಮದಲ್ಲಿ ಹರಿಹರ ಮತ್ತು ಹರಪನಹಳ್ಳಿ ಗಡಿಗಳಲ್ಲಿ ನೈಸರ್ಗಿಕ ಗಡಿಗಳನ್ನು ರೂಪಿಸುತ್ತದೆ. ದಾವಣಗೆರೆ ಮತ್ತು ಹರಿಹರ ಪಟ್ಟಣಗಳು NH4 ನ ಮೂಲಕ ವಿಶಾಲವಾದ ರೈಲು ಮಾರ್ಗವನ್ನು ಹಾದು ಹೋಗುತ್ತವೆ.

1997 ನೇ ಇಸವಿಯಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್‌, ದಾವಣಗೆರೆಯನ್ನು ಸ್ವತಂತ್ರ ಜಿಲ್ಲೆಯಾಗಿ ಮಾರ್ಪಡಿಸಿದರು. ಇದಕ್ಕೂ ಮೊದಲು ದಾವಣಗೆರೆಯು ಚಿತ್ರದುರ್ಗ ಜಿಲ್ಲೆಯ ತಾಲ್ಲೂಕುಗಳಲ್ಲೊಂದಾಗಿತ್ತು. ದಾವಣಗೆರೆ ಜಿಲ್ಲೆಯು ಆರು ತಾಲ್ಲೂಕುಗಳಿಂದ ಕೂಡಿದ್ದು ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಡುತ್ತದೆ.

 

ಕ್ರ ಸಂ.

ತಾಲ್ಲೂಕಿನ ಹೆಸರು

ಹಳ್ಳಿಗಳ

ಸಂಖ್ಯೆ

ಪಟ್ಟಣಗಳ

ಸಂಖ್ಯೆ

ಭೌಗೋಳಿಕ ವಿಸ್ತೀರ್ಣ (.ಕೀ)

ಪುರುಷ

ಮಹಿಳೆ

ಒಟ್ಟು

ಪ್ರತಿ ಚದರ ಕಿಲೋ ಮೀಟರಿಗೆ ಸಾಂದ್ರತೆ

 

1

ದಾವಣಗೆರೆ

172

1

956.58

309642

292881

602523

644

 

2

ಹರಿಹರ

87

1

484.62

126128

119526

245654

515

 

3

ಹೊನ್ನಾಳಿ

168

1

884.74

113577

109015

222592

251

 

4

ಚನ್ನಗಿರಿ

246

1

1170.86

149796

142711

292507

242

 

5

ಜಗಳೂರು

170

1

963.35

80954

77929

158883

165

 

 

ಒಟ್ಟು

843

5

4460.15

780097

742062

1522159

1817

 

ತಾಲ್ಲೂಕಿನ ಗ್ರಾಮಗಳು ಮತ್ತು ಪಟ್ಟಣಗಳ ಸಂಖ್ಯೆ, ಪ್ರದೇಶ, ಜನಸಂಖ್ಯೆ, ಸಾಂದ್ರತೆ ದಾವಣಗೆರೆ ಜಿಲ್ಲೆಯಲ್ಲಿ.

ಜಿಲ್ಲೆಯ ಬಗ್ಗೆ

ದಾವಣಗೆರೆ – ಕರ್ನಾಟಕ ರಾಜ್ಯದ ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ. ದಾವಣಗೆರೆ ಜವಳಿ ಉದ್ಯಮಕ್ಕೆ ಜನಪ್ರಿಯ. ಇಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ ಬಹಳ ಜನಪ್ರಿಯವಾಗಿದ್ದ ಹೆಸರು. ಈಗ ಈ ಊರು ಶರವೇಗದಿಂದ ಬೆಳೆಯುತ್ತಿದೆ. ದಾವಣಗೆರೆಯ ಮೊದಲಿನ ಹೆಸರು “ದವನಗಿರಿ” ಅದು ಕಾಲ ಕ್ರಮೇಣ ದಾವಣಗೆರೆ ಆಯಿತು.

                                     

              ದಾವಣಗೆರೆಯು ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಸ್ಥಳವಾಗಿದ್ದು, ಇಲ್ಲಿ ಹತ್ತಿ, ಮೆಕ್ಕೆಜೋಳ, ಕಡಲೆ, ಸೂರ್ಯಕಾಂತಿ, ಜೋಳ, ಅಕ್ಕಿ/ಭತ್ತ, ಮತ್ತು ಇತರ ಪ್ರಮುಖ ವಾಣಿಜ್ಯ ಬೆಳೆಗಳನ್ನು ಕರ್ನಾಟಕದ ಇತರ ಜಿಲ್ಲೆಗಳಿಂದ ತಂದು ಮಾರುತ್ತಾರೆ. ದಾವಣಗೆರೆ ಇತ್ತೀಚೆಗೆ ರಾಜ್ಯದ ಪ್ರಮುಖ ವಿದ್ಯಾಕೇಂದ್ರವಾಗಿ ಬೆಳೆದಿದ್ದು, ಇಲ್ಲಿ ಚಿತ್ರಕಲೆ, ವಸ್ತ್ರ ವಿನ್ಯಾಸ ಶಾಸ್ತ್ರ , ಎಂಜಿನಿಯರಿಂಗ್ (ಅಭಿಯಂತರ ಶಾಸ್ತ್ರ), ವೈದ್ಯಕೀಯ, ಕಲೆ, ವಾಣಿಜ್ಯ ಹಾಗು ಇತರ ವಿದ್ಯಾ ವಿಭಾಗಗಳನ್ನು ಹೊಂದಿರುವ ಮಹಾವಿದ್ಯಾಲಯಗಳಿವೆ.

 

ದಾವಣಗೆರೆಯು ಕರ್ನಾಟಕದ ಹೃದಯಭಾಗದಲ್ಲಿ 14° 28’ ರೇಖಾಂಶ ಮತ್ತು 75° 59’ ಅಕ್ಷಾಂಶದಲ್ಲಿದ್ದು ಸಮುದ್ರ ಮಟ್ಟದಿಂದ 602.5 ಮೀ ಎತ್ತರದಲ್ಲಿದೆ. ದಾವಣಗೆರೆಯಲ್ಲಿ ಬೆಣ್ಣೆ ದೋಸೆ ತುಂಬ ರುಚಿಯಾಗಿರುತ್ತವೆ ಮತ್ತು ವಿಶಿಷ್ಟ. ಸಿಹಿ ತಿನಿಸಾದ ಗುಳ್ಳಡಿಕಿ ಉಂಡಿ ದಾವಣಗೆರೆಯಲ್ಲಿ ಮಾತ್ರ ಮಾಡಲಾಗುತ್ತದೆ ಮತ್ತು ದೊರೆಯುತ್ತದೆ.

 

ಜನಸಂಖ್ಯಾಶಾಸ್ತ್ರ:-

2011 ರ ಜನಗಣತಿಯ ಜನಗಣತಿಯ ಪ್ರಕಾರ.

 

ಕ್ರಮ ಸಂಖ್ಯೆ

ಜನಸಂಖ್ಯಾ ಲೇಬಲ್

ಮೌಲ್ಯ

1

ವಿಸ್ತೀರ್ಣ

5924 ಚ.ಕಿ

2

ಕಂದಾಯ ವಿಭಾಗಗಳ ಸಂಖ್ಯೆ

2

3

ತಾಲ್ಲೂಕುಗಳ ಸಂಖ್ಯೆ

6

4

ಹೋಬಳಿಗಳ ಸಂಖ್ಯೆ

24

5

ಗ್ರಾಮ ಪಂಚಾಯತಿಗಳ ಸಂಖ್ಯೆ

233

6

ಗ್ರಾಮಗಳ ಸಂಖ್ಯೆ

932

 

ಒಟ್ಟು ಜನಸಂಖ್ಯೆ

1945497

 

ದಾವಣಗೆರೆ ಜಿಲ್ಲೆಯ ನಕ್ಷೆ

 

 

 ಎಸ್.ಟಿ.ಡಿ ಮತ್ತು ಪಿನ್ ಕೋಡ್ ಗಳು:

 

ಕ್ರಮ ಸಂಖ್ಯೆ

ನಗರ / ತಾಲ್ಲೂಕು

ಪಿನ್ ಕೋಡ್

ಎಸ್.ಟಿ.ಡಿ ಕೋಡ್

1

ದಾವಣಗೆರೆ ನಗರ

577002

08192

2

ದಾವಣಗೆರೆ ತಾಲೂಕು

577002

08192

3

ಚನ್ನಗಿರಿ

577213

08189

4

ಹೊನ್ನಾಳಿ

577217

08188

5

ಹರಿಹರ

577601

08197

6

ಜಗಳೂರು

577528

08196

 ಪ್ರವಾಸೋದ್ಯಮ:-

ದಾವಣಗೆರೆ

ಶಿವಮೊಗ್ಗ, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳ ಹಲವು ತಾಲೂಕುಗಳನ್ನು ಒಟ್ಟು ಸೇರಿಸಿ  1997 ರಲ್ಲಿ ದಾವಣಗೆರೆ ಜಿಲ್ಲೆ ಸ್ಥಾಪಿಸಲಾಯಿತು. ದಾವಣಗೆರೆ ಬೆಂಗಳೂರಿನಿಂದ ವಾಯುವ್ಯಕ್ಕೆ 260 ಕಿ.ಮೀ ದೂರದಲ್ಲಿದ್ದು ಕರ್ನಾಟಕದ ಮಧ್ಯ ಭಾಗದಲ್ಲಿದೆ.

ದಾವಣಗೆರೆ ಬೆಣ್ಣೆ ದೋಸೆ ಈ ಪ್ರದೇಶದ ಜನಪ್ರಿಯ ಉಪಾಹಾರವಾಗಿದೆ.  ಶಾಂತಿಸಾಗರಹರಿಹರ, ಕೊಂಡಜ್ಜಿ ಕೆರೆ,  ಸಂತೆಬೆನ್ನೂರು ಪುಷ್ಕರಣಿ, ತೀರ್ಥರಾಮೇಶ್ವರಗಾಜಿನ ಮನೆ, ಹಾಗೂ  ದುಗ್ಗಮ್ಮ ದೇವಾಲಯ  ದಾವಣಗೆರೆಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳು. ದಾವಣಗೆರೆ ಹತ್ತಿ ಇಳುವರಿ ಮತ್ತು ಹತ್ತಿ ಮಗ್ಗ (ಮಿಲ್) ಗಳಿಗೆ ಹೆಸರುವಾಸಿಯಾಗಿದೆ.

ಇತ್ತೀಚಿನ ನವೀಕರಣ​ : 01-09-2021 12:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ದಾವಣಗೆರೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080